ಡಿಸೆಂಬರ್ ೪ - ಡಿಸೆಂಬರ್ ತಿಂಗಳಿನ ನಾಲ್ಕನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೩೮ನೇ (ಅಧಿಕ ವರ್ಷದಲ್ಲಿ ೩೩೯ನೇ) ದಿನ. ಡಿಸೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೬೩೯ - ಇಂಗ್ಲೆಂಡ್ನ ಖಗೋಳಶಾಸ್ತ್ರ ತಜ್ಞ ಜೆರೆಮಿಯ ಹೊರ್ರೊಕ್ಸ್ ಶುಕ್ರ ಗ್ರಹವು ಸೂರ್ಯನ ಮುಂದೆ ಹಾಯುವುದನ್ನು ಮೊದಲ ಬಾರಿಗೆ ಪ್ರದರ್ಶಿಸಿದನು. ೧೮೨೯ - ಬ್ರಿಟಿಷ್ ಭಾರತದ ಗವರ್ನರ್ ಜನರಲ್ ಲಾರ್ಡ್ ವಿಲಿಯಮ್ ಬೆನ್ಟಿನ್ಕ್ ಸತಿ ಪದ್ಧತಿಯನ್ನು ರದ್ದುಪಡಿಸಿದನು. ೧೯೫೨ - ಲಂಡನ್ ನಗರದಲ್ಲಿ ಉಂಟಾದ ಹೊಗೆ ಮತ್ತು ಮಂಜಿನ ಮಿಶ್ರಣವು (ಸ್ಮೊಗ್) ಮುಂದಿನ ದಿನಗಳಲ್ಲಿ ಸುಮಾರು ೧೨,೦೦೦ ಜನರ ಮರಣಕ್ಕೆ ಕಾರಣವಾಯಿತು. ೧೯೭೧ - ೧೯೭೧ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಭಾರತದ ಜಲಸೇನೆಯು ಕರಾಚಿಯ ಮೇಲೆ ಆಕ್ರಮಣ ಮಾಡಿತು. ೧೯೮೨ - ಚೀನಿ ಜನರ ಗಣರಾಜ್ಯ ತನ್ನ ಪ್ರಸಕ್ತ ಸಂವಿಧಾನವನ್ನು ಅಳವಡಿಸಿಕೊಂಡಿತು. == ಜನನ == ೧೮೮೮ - ಆರ್. ಸಿ. ಮಜುಮ್‌ದಾರ್, ಭಾರತದ ಇತಿಹಾಸಕಾರ ೧೮೯೨ - ಫ್ರಾನ್ಸಿಸ್ಕೊ ಫ್ರಾಂಕೊ, ಸ್ಪೇನ್ನ ಸರ್ವಾಧಿಕಾರಿ. ೧೮೯೮ - ಕೆ. ಎಸ್. ಕೃಷ್ಣನ್, ಭಾರತದ ಖ್ಯಾತ ಭೌತವಿಜ್ಞಾನಿ ೧೯೦೮ - ಆಲ್‌ಫ಼್ರೆಡ್ ಹರ್ಶಿ, ಅಮೇರಿಕಾದ ಖ್ಯಾತ ಬ್ಯಾಕ್ಟೀರಿಯಾ ತಜ್ಞ ೧೯೧೦ - ಆರ್. ವೆಂಕಟರಾಮನ್, ಭಾರತದ ೮ನೇ ರಾಷ್ಟ್ರಪತಿ ೧೯೧೯ - ಇಂದ್ರ ಕುಮಾರ್ ಗುಜರಾಲ್, ಭಾರತದ ೧೩ನೇ ಪ್ರಧಾನ ಮಂತ್ರಿ ೧೯೬೩ - ಸೆರ್ಗೈ ಬುಬ್ಕ, ಯುಕ್ರೇನ್ನ ಪೋಲ್ ವಾಲ್ಟ್ ಕ್ರೀಡಾಪಟು. ೧೯೭೭ - ಅಜಿತ್ ಅಗರ್ಕರ್, ಭಾರತದ ಕ್ರಿಕೆಟ್ ಆಟಗಾರ == ಮರಣ == ೧೧೨೩ - ಒಮಾರ್ ಖಯ್ಯಾಮ್, ಪರ್ಶಿಯಾದ ಕವಿ, ಗಣಿತಜ್ಞ ಮತ್ತು ತತ್ವಜ್ಞಾನಿ. ೧೯೪೫ - ಥಾಮಸ್ ಹಂಟ್ ಮಾರ್ಗನ್, ಅಮೇರಿಕ ದೇಶದ ವಂಶವಾಹಿಶಾಸ್ತ್ರದ ತಜ್ಞ. == ದಿನಾಚರಣೆಗಳು == ಭಾರತ - ಜಲಸೇನೆ ದಿನ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ